Monday, October 27, 2008

ಕನ್ನಡ ರಾಜ್ಯೋತ್ಸವ ಆಚರಿಸಲು ತಯಾರಿ!!

ನಿನ್ನೆಯಿಂದ ನಾನು ರೇಡಿಯೋ ಸಲಾಂ ನಮಸ್ತೆ 104.9 FM ನಲ್ಲಿ ಕನ್ನಡ ಕಾರ್ಯಕ್ರಮ ಶುರು ಮಾಡಿದೆ. ನಾನು ನಿರಿಕ್ಷಿಸಿದ್ದಿಕಿಂಥ ಬಹಳ ಜಾಸ್ತಿ ಕೇಳುಗರಿಂದ ದೂರವಾಣಿ ಕರೆಗಳು ಬಂದವು. ಇಷ್ಟು ಒಳ್ಳೆ ಪ್ರತಿಕ್ರಿಯೆಯನ್ನು ನಾನು ನಿರಿಕ್ಷಿರಿಲ್ಲ. ಎಲ್ಲ ಕೇಳುಗರು ತುಂಬ ಸಂತೋಷ ವ್ಯಕ್ತ ಪಡಿಸಿ ರೇಡಿಯೋ ಸಲಾಂ ನಮಸ್ತೆ ಮತ್ತು ನನ್ನನು ಅಭಿನಂದಿಸಿದರು. ಒಬ್ಬ ಕೇಳುಗರು ರಾಜೀವ್ ಕುಲಕರ್ಣಿ ಕಾರ್ಯಕ್ರಮದ ನಂತರ ಮತ್ತೊಮ್ಮೆ ಕರೆ ಮಾಡಿ ಸುಮಾರು ಹೊತ್ತು ಮಾತನಾಡಿದರು. ಮೊದಲನೆ ಕಾರ್ಯಕ್ರಮದಲ್ಲಿ ಕರ್ನಾಟಕದ ನಾದ ಗೀತೆ "ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ......" ಗೀತೆ ಯಿಂದ ಪ್ರಾರಂಬಿಸಿ ನಟಸಾರ್ವಭೌಮ ದಿ. ಡಾ. ರಾಜ್ ಕುಮಾರ್ ಅವರ "ಹುಟ್ಟಿದರೆ ಕನ್ನದಲಿ ಹುತ್ತ ಬೇಕು.... " ಮತ್ತು ಮುಂಗಾರು ಮಳೆ ಚಿತ್ರದಿಂದ "ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ... " ಹಾಡನ್ನು ಪ್ರಸಾರ ಮಾಡುವಷ್ಟರಲ್ಲಿ ಸಮಯ ಮುಗಿಯುತ್ತ ಬಂತು.

ಮೊದಲ ನಾಲ್ಕು ವರ ಈ ಕಾರ್ಯಕ್ರಮಕ್ಕೆ ಕೇವಲ ೩೦ ನಿಮಿಷ ಮಾತ್ರ ನೆಮಿಸಿಧ್ಧರೆ, ಡಾಲ್ಲಸ್ ನಲ್ಲಿ ಇರುವ ಕನ್ನಡಿಗರ ಮತ್ತು ಇಲ್ಲಿನ ಉದ್ಯಮಿಗಳ ಪ್ರತಿಕ್ರಿಯೆ ಪರೀಕ್ಷಿಸಿ ಈ ಕಾರ್ಯಕ್ರಮವನ್ನು ೬೦ ನಿಮಿಷಕ್ಕೆ ಹೆಚ್ಚಿಸುವ ಉದ್ದೇಶ ಇದೆ.

ನಮ್ಮ ಕನ್ನಡ ಕಸ್ತೂರಿ ಕಾರ್ಯಕ್ರಮ ಕೇಳಬೇಕೆನಿಸಿದರೆ ಪ್ರತಿ ಶನಿವಾರ ಮಧ್ಯಾಹ್ನ ೧೨.೩೦ ಯಿಂದ ೧.೦೦ ವರಗೆ ರೇಡಿಯೋ ಸಲಾಂ ನಮಸ್ತೆ 104.9 FM ಕೇಳಿ.

No comments: